ಇಷ್ಟಲಿಂಗ

       ವಿವಿಧ ಶ್ರೇಷ್ಠ ಸಂಸ್ಕೃತಿ , ಪರಂಪರೆ, ರೂಢಿ, ಪದ್ದತಿಗಳು ಹಾಗೂ  ಆಚಾರ-ವಿಚಾರಗಳನ್ನು ಒಳಗೊಂಡಿರುವ ನಮ್ಮ ಹೆಮ್ಮೆಯ ಶ್ರೇಷ್ಠ ಭಾರತ ದೇಶದಲ್ಲಿ ಇಷ್ಟಲಿಂಗ ಆರಾಧಾನ ಸಂಸ್ಕೃತಿಯೂ ಕೂಡಾ ಪ್ರಧಾನ ಸ್ಥಾನದಲ್ಲಿದೆ. ಕರ್ನಾಟಕ, ಮಹಾರಾಷ್ಟ್ರ, ಆಂಧ್ರಪ್ರದೇಶ, ತಮಿಳುನಾಡು ಸೇರಿದಂತೆ ದೇಶದ ವಿವಿಧ ರಾಜ್ಯಗಳಲ್ಲಿ ಈ ಇಷ್ಟಲಿಂಗ ಆರಾಧನಾ ಸಂಪ್ರದಾಯವಿದೆ, ಇಂತಹ ಸಂಪ್ರದಾಯದಲ್ಲಿ ಇಷ್ಟಲಿಂಗವು ಪ್ರಧಾನ ದೈವವಾಗಿದೆ.

       ಚೈತನನ್ಯಮಯವಾದ ಹಾಗೂ ಪ್ರಾಣಸ್ವರೂಪಿಯಾದ ಅರುಹಿನ ಕುರುಹು ಇಷ್ಟಲಿಂಗ. ನಿರಾಕಾರ ದೇವನನ್ನು/ಶಿವನನ್ನು ವಿಶ್ವದ ಆಕಾರದಲ್ಲಿ ತಾತ್ವಿಕವಾಗಿ ರೂಪಿಸಿ ಕರಸ್ಥಳದಲ್ಲಿರಿಸಿ ಪೂಜಿಸುವ / ದ್ಯಾನಿಸುವ ವೈಶಿಷ್ಟ್ಯ ಪೂರ್ಣ ಉಪಾಸನಾ ಸಾಧನ ಇಷ್ಟಲಿಂಗ. ಗುರುವಿನಿಂದ ದೀಕ್ಷೆಯ ಮೂಲಕ ಅಥವಾ ಅಯ್ಯತನವನ್ನು ಪಡೆಯುವುದರ ಮೂಲಕವಾಗಿ ಇಷ್ಟಲಿಂಗವನ್ನು  ಪಡೆದುಕೊಂಡು ದೇಹದ ಮೇಲೆ ಸದಾಕಾಲವೂ ಧರಿಸಿಕೊಂಡು ಪೂಜಿಸಲ್ಪಡುವ ಗೋಲಾಕಾರದ ಕಪ್ಪು ವರ್ಣದ ಲಾಂಛನವಿದು. ಅತ್ಯಂತ ಹೊಳಪಿನ ಕಪ್ಪು ಹೊರ ಮೈ ಇರುವ ಗೋಲಾಕಾರದ ಈ ಕುರುಹಿಗೆ ಇಷ್ಟಲಿಂಗವೆಂಬ ಹೆಸರು.

 

Benalmath kantiworks. Maker of Ishta Linga

ವಿಶ್ವ ಗುರು ಬಸವಣ್ಣನವರು ತಮ್ಮ ವಚನದಲ್ಲಿ ಹೀಗೆ ಹೇಳಿದ್ದಾರೆ

ಜಗದಗಲ ಮುಗಿಲಗಲ ಮಿಗೆಯಗಲ ನಿಮ್ಮಗಲ!

ಪಾತಾಳದಿಂದತ್ತತ್ತನಿಮ್ಮಶ್ರೀಚರಣ!

ಬ್ರಹ್ಮಾಂಡದಿಂದತ್ತತ್ತನಿಮ್ಮಶ್ರೀಮಕುಟ!

ಅಗಮ್ಯ ಅಪ್ರಮಾಣ ಅಗೋಚರ ಅಪ್ರತಿಮಲಿಂಗವೇ,

ಕೂಡಲಸಂಗಮದೇವಯ್ಯ,

ಎನ್ನ ಕರಸ್ಥಲಕ್ಕೆ ಬಂದು ಚುಳುಕಾದಿರಯ್ಯ.

ಇಷ್ಟಲಿಂಗವು ಕಪ್ಪಾದ ಕಾಂತಿಯುಕ್ತವಾದ ಕಂಥೆಯನ್ನು ಹೊಂದಿರುವ ಕಾರಣ ಅದು ದೃಷ್ಟಿ ಯೋಗ ಅಥವಾ ತ್ರಾಟಕ ಯೋಗಕ್ಕೆ ಸಹಾಯಕ ಸಾಧನವಾಗುವುದು. ಆಲಿಯ ಕಪ್ಪು- ಕಂಥೆಯ ಕಪ್ಪು ಪರಸ್ಪರ ಆಕರ್ಶಿಸಲ್ಪಟ್ಟು ಬೇಗನೆ ಚಿತ್ತ ಏಕಾಗ್ರತೆಯ ಅನುಭವವಾಗುವುದು. ಆಧ್ಯಾತ್ಮಿಕವಾಗಿ ಇದು ಭಾವಸಾಗರವನ್ನು ದಾಟಿಸುವ ಹಡಗಿನಂತೆ. ಇಂತಹ ಇಷ್ಟಲಿಂಗವನ್ನು ಧರಿಸುವುದಕ್ಕೆ ಯಾವುದೇ ಜಾತಿ, ಜನಾಂಗ, ಸ್ತ್ರೀ,  ಪುರುಷ ಎಂಬ ಬೇದಭಾವವಿಲ್ಲ, ಯಾರುಬೇಕಾದರೂ ಗುರುವಿನಿಂದ ದೀಕ್ಷೆಯ ಮೂಲಕ ಇಷ್ಟಲಿಂಗವನ್ನು  ಪಡೆದುಕೊಳ್ಳಬಹುದು, ತನ್ನ ತಾನರಿಯಲು ಹಾಗೂ ಆತ್ಮ ಶಕ್ತಿಯನ್ನು ಜಾಗೃತಿ ಮಾಡಿಕೊಳ್ಳಲು ಶಿವಯೋಗ / ದೃಷ್ಟಿಯೋಗ ಅಥವಾ ತ್ರಾಟಕಯೋಗದಲ್ಲಿ ತೊಡಗಿಸಿಕೊಳ್ಳಬಹುದು.

ಇಷ್ಟ ಲಿಂಗ ಪೂಜೆಯನ್ನು ಜ್ಞಾನ ಮುದ್ರೆಯಲ್ಲಿ ಮಾಡಬೇಕು
ಜ್ಞಾನ ಮುದ್ರೆ

ಎರಡೂ ಕೈಗಳನ್ನು ಮೇಲ್ಮುಖವಾಗಿ ಇಟ್ಟು ಆಯಾ ಕೈಗಳ ತೋರು ಬೆರಳಿಗೆ ಹೆಬ್ಬೆರಳಿನ ತುದಿಯನ್ನು ತಾಗಿಸಿ. ಉಳಿದ ಮೂರು ಬೆರಳುಗಳು ನೇರವಾಗಿ ಇರಲಿ. ಒತ್ತಡ ನೀಡಬೇಕಾದ ಅಗತ್ಯ ಇಲ್ಲ.

ಪ್ರಯೋಜನ: ಮೆದುಳಿನ ಶಕ್ತಿ, ಏಕಾಗ್ರತೆ, ಜ್ಞಾಪಕ ಶಕ್ತಿ ಹೆಚ್ಚಾಗುತ್ತದೆ. ನಾಡಿಗಳಲ್ಲಿ ಶಕ್ತಿ ಬಲವಾಗಿ ಸಂಚರಿಸುತ್ತದೆ. ಇದು ವಿಶೇಷವಾಗಿ ವಿದ್ಯಾರ್ಥಿಗಳಿಗೆ ಸಹಕಾರಿ.

ನಿದ್ರಾಹೀನತೆ, ಉದ್ವೇಗ, ಭಯ, ಒತ್ತಡ, ಮಾನಸಿಕ ಚಂಚಲತೆ ದೂರವಾಗುತ್ತದೆ. ಅಧಿಕವಾದ ಸಿಟ್ಟನ್ನು ಶಮನಗೊಳಿಸುವುದರ ಜೊತೆಗೆ ಮನುಷ್ಯ ಸ್ವಭಾವಗಳಾದ ಹಟಮಾರಿತನ, ಆಲಸ್ಯ, ಸಂಶಯ, ಅತಿ ನಿದ್ರೆಯನ್ನು ಹೋಗಲಾಡಿಸುತ್ತದೆ.

ಅಧ್ಯಾತ್ಮ ಶಕ್ತಿಯ ವೃದ್ಧಿಗೆ ಜ್ಞಾನ ಮುದ್ರೆ ಸಹಾಯಕ. ಪಿಟ್ಯುಟರಿ ಗ್ರಂಥಿಗಳ ಕಾರ್ಯಕ್ಷಮತೆ ಹೆಚ್ಚಿಸುವುದರೊಂದಿಗೆ ದೇಹಕ್ಕೆ ಹೊಸ ಚೈತನ್ಯವನ್ನು ತುಂಬಿಸುತ್ತದೆ. ಎಷ್ಟು ಹೊತ್ತು ಬೇಕಾದರೂ ಮಾಡಬಹುದು.

ಅಂತೆಯೇ ಷಣ್ಮುಖ ಸ್ವಾಮಿಗಳು ‘ಇಷ್ಟಲಿಂಗವು ತನ್ನಿಂದ ಭಿನ್ನವಾದ ವಸ್ತುವಿನ ಮೂರ್ತಿಪೋಜೆಯಲ್ಲ ; ಜೀವಾತ್ಮ-ಪರಮಾತ್ಮರನ್ನ ಬೆಸುಗೆ ಮಾಡಿ ಪೂಜಿಸುವ ಅಹಂಗ್ರಹೋಪಾಸನೆ ‘ ಎಂದು ಹೇಳಿರುವರು.

ಎನ್ನ ಕರಸ್ಥಲದ ಮದ್ಯದಲ್ಲಿ ಪರಮ ನಿರಂಜನದ
ಕುರುಹು ತೋರಿದ, ಆ ಕುರುಹಿನ ಮಧ್ಯದಲ್ಲಿ
ಅರುಹಿನ ಕಳೆಯ ತೋರಿದ;
ಆ ಕಳೆಯ ಮಧ್ಯೆದಲ್ಲಿ ಮಹಾಜ್ಞಾನದ ಬೆಳಗ ತೋರಿದ
ಆ ಬೆಳಗಿನ ನಿಳುವಿನೊಳಗೆ ಎನ್ನ ತೋರಿದ
ಎನ್ನೋಳಗೇ ತನ್ನ ತೋರಿದ, ತನ್ನೊಳಗೆ ಎನ್ನ ನಿಂಬಿಟ್ಟು ಕೊಂಡ
ಮಹಾ ಗುರುವಿಗೆ ನಮೋ ನಮೋ ಎನುತಿರ್ಪೆ
ನಯ್ಯಾ ಅಖಂಡೇಶ್ವರಾ !

ಇಷ್ಟಲಿಂಗವನ್ನು ಆನ್ಲೈನ್ ನಲ್ಲಿ ಖರೀದಿಸುವುದು ಹೇಗೆ?

ಇಷ್ಟಲಿಂಗ ಪೂಜೆ, ಧ್ಯಾನ, ಶಿವಯೋಗ, ತ್ರಾಟಕ ಯೋಗ, ದೃಷ್ಟಿ ಯೋಗ ಹಾಗೂ ಮುಂತಾದ ಯೋಗ ಸಾಧನೆಗಳಿಗಾಗಿ ಸಾಂಪ್ರದಾಯಿಕ ಇಷ್ಟಲಿಂಗ ಮತ್ತು ವೈಜ್ಞಾನಿಕ/ವಿಶೇಷ ಇಷ್ಟಲಿಂಗಗಳನ್ನು ಆನ್ಲೈನ್ ಮೂಲಕ ಪೂರೈಸುವುದಕ್ಕಾಗಿ 

www.tuppadakantilinga.com ಎಂಬ ವೆಬ್ಸೈಟ್ ಅನ್ನು ಲಾಂಚ್ ಮಾಡಿದ್ದು, ಇದು Benalmath Kantiworks ಎಂಬ ಹೆಸರಿನ ಮೂಲಕ ಕಾರ್ಯ ನಿರ್ವಹಿಸುತ್ತಿದೆ. ಇದು ಕನ್ನಡ ಮತ್ತು ಇಂಗ್ಲೀಷ್ ಎರಡೂ ಭಾಷೆಗಳಲ್ಲೂ ಲಭ್ಯವಿದೆ. ಇಲ್ಲಿ ಎಲ್ಲ ರೀತಿಯ ಕಂತಿಯಿಂದ ತಯಾರಿಸಿದ ಎಲ್ಲಾ ಗಾತ್ರದ (ಅಳತೆಯ) ಇಷ್ಟಲಿಂಗಗಳು ಲಭ್ಯವಿವೆ. ಅವಶ್ಯಕತೆ ಇದ್ದವರು ಮಾತ್ರ ಆನ್ ಲೈನ್ ನಲ್ಲಿ  ಆರ್ಡರ್ ಮಾಡಿ ಹೋಮ್ ಡೆಲೆವರಿ ಪಡೆಯಬಹುದು.

Ishtalinga store

15 thoughts on “ಇಷ್ಟಲಿಂಗ ಎಂದರೇನು ? ಇಷ್ಟಲಿಂಗವನ್ನು ಆನ್ಲೈನ್ ನಲ್ಲಿ ಖರೀದಿಸುವುದು ಹೇಗೆ ?

  1. ಶಿವು ಹಿರೇಮಠ says:

    ಇಷ್ಟಲಿಂಗ ಕುರಿತು ತುಂಬಾ ಉಪಯುಕ್ತವಾದ ಮಾಹಿತಿ ನೀಡಿದ್ದೀರಿ ದನ್ಯವಾದಗಳು.

  2. ಮಲ್ಲಯ್ಯ says:

    ತುಂಬಾ ಉಪಯುಕ್ತವಾದ ಮಾಹಿತಿ ನೀಡಿದ್ದೀರಿ ಧನ್ಯವಾದಗಳು.

  3. Swamyshetty says:

    ಅತ್ಯುತ್ತಮ ಮಾಹಿತಿ ನೀಡಿದ್ದೀರಿ ,ಆ ಸಲುವಾಗಿ ಅನಂತ ಧನ್ಯವಾದಗಳು , ಆದರೆ ಇಷ್ಠಲಿಂಗದ ಹರಿಕಾರ ಭಕ್ತಿ ಭಂಡಾರಿ ಬಸವಣ್ಣನವರು ಅಲ್ಲ , ಅದಕ್ಕಿಂತ ಸಾವಿರಾರು ವರ್ಷಗಳ ಮೊದಲೇ ಅಷ್ಟೇ ಏಕೆ ಕೃತಯುಗದ ಆದಿಯಿಂದಲೂ ಇಷ್ಠಲಿಂಗ ಧಾರಣೆ ಹಾಗೂ ಇಷ್ಠಲಿಂಗ ಪೂಜೆ ಆಚರಣೆಯಲ್ಲಿ ಇತ್ತು ಎಂಬುದಾಗಿ ಹಲವಾರು ಗ್ರಂಥಗಳಲ್ಲಿ ಉಲ್ಲೇಖವಿದೆ . ಬಸವಣ್ಣನವರು ತಮ್ಮ ಮೊದಲ ವಿಪ್ರ ಧರ್ಮವನ್ನು ಸ್ವಯಂ ಪ್ರೇರಿತರಾಗಿ ತ್ಯಜಿಸಿ , ವೀರಶೈವ ಧರ್ಮಾವಲಂಬಿಗಳಾಗಿ , ಭಕ್ತಿ ಭಂಡಾರಿ ಬಸವಣ್ಣ ಎಂಬ ಅಭಿದಾನದಿಂದ ಜಗದ್ವಿಖ್ಯಾತ ರಾಗಿದ್ದಾರೆ ……

    • Mahantesh says:

      ಇಷ್ಟಲಿಂಗದ ಹರಿಕಾರ ಗುರು ಬಸವಣ್ಣನವರೆ ಆಗಿರುವರು. ಅಷ್ಟೇ ಅಲ್ಲ ಲಿಂಗಾಯತ ಧರ್ಮದ ಗುರುಬಸವಣ್ಣನವರು ಆಗಿದ್ದಾರೆ. ಇಷ್ಟಲಿಂಗ ಯೋಗ ಬಸವ ಯೋಗ ಎಂದು ಸಿದ್ಧರಾಮೇಶ್ವರರು ತಮ್ಮ ಬಸವ ಸ್ತೋತ್ರದಲ್ಲಿ ಹೇಳಿದ್ದಾರೆ… ಇಷ್ಟಲಿಂಗ ಯೋಗ ಬಸವ ಯೋಗವೇ ಆಗಿದೆ.
      ಇಷ್ಟಲಿಂಗದ ಪೂರ್ವದಲ್ಲಿ ಇದ್ದ ಲಿಂಗಗಳು ಸ್ಥಾವರ ಲಿಂಗಗಳು ಮತ್ತು ಚರ ಲಿಂಗಗಳು ಆಗಿದ್ದವು ಅವುಗಳಿಗೆ ಯಾವುದೇ ರೀತಿಯ ಕೊಡುತ್ತಿರಲಿಲ್ಲ. ಸಾಗರ ಲಿಂಗಗಳು ಮತ್ತು ಚರ ಲಿಂಗಗಳು ಯೋಗಿ ಶಿವನ ಸಂಕೇತವಾಗಿವೆ. ಆದರೆ ಇಷ್ಟಲಿಂಗ ಪ್ರತಿಯೊಬ್ಬರ ಅಂತರಂಗದಲ್ಲಿ ಅಡಗಿರುವ ಘನ ಚೈತನ್ಯದ ಕುರುಹುವಾಗಿದೆ.
      ಶಿವ ಗುರುವೆಂದು ಬಲ್ಲಾತನೆ ಗುರು ಶಿವಲಿಂಗ ಎಂದು ಬಲ್ಲಾತನೇ ಗುರು ಶಿವಜಂಗಮವೆಂದು ಬಲ್ಲಾತನೆ ಗುರು ಶಿವ ಪಾದೋದಕ ಎಂದು ಬಲ್ಲಾತನೆ ಗುರು ಶಿವ ಪ್ರಸಾದವೆಂದು ಬಲ್ಪಂಲಾತನೆ ಗುರು. ಇಂತಿ ಪಂಚ ವಿಧವೆ ಪಂಚಬ್ರಹ್ಮ ವೆಂದು ಅರುಹಿದ ಮಹಾಮಹಿಮ ಸಂಗನ ಬಸವಣ್ಣನವರು ಅವರು ನಿಮಗೆ ಯು ಗುರು ನಿಮಗೆಯು ಗುರು.ಜಗವೆಲಲಕ್ಕೂ ಗುರು ಕಾಣಾ ಗುಹೇಶ್ವರ .
      -ಲಿಂಗಾಯತ ಧರ್ಮದ ಪ್ರಥಮ ಪೀಠ ಶೂನ್ಯ ಪೀಠದ ಪ್ರಥಮ ಪೀಠಾಧಿಪತಿ ಬಾ ಮೂರುತಿ ಅಲ್ಲಮಪ್ರಭು ದೇವರ ದಿವ್ಯ ವಚನ

    • Sangamesh K B says:

      ಈ ರೀತಿ ತಪ್ಪು ಮಾಹಿತಿಯನ್ನು ನೀವು ಹಾಕಬಾರದು
      ಬಸವಣ್ಣನವರೆ ಇಷ್ಟಲಿಂಗದ ಜನಕರು

      ಆದಿ ಬಸವಣ್ಣ ಅನಾದಿ ಲಿಂಗ ಎಂಬರು ಹುಸಿ ಹುಸಿ ಈ ನುಡಿಯ ಕೇಳಲಾಗದು
      ಆದಿ ಲಿಂಗ ಅನಾದಿ ಬಸವಣ್ಣ
      ಲಿಂಗ ಬಸವಣ್ಣನ ಉದರದಲ್ಲಿ ಹುಟ್ಟಿತ್ತು
      ಜಂಗಮ ಬಸವಣ್ಣನ ಉದರದಲ್ಲಿ ಹುಟ್ಟಿತ್ತು
      ಕೂಡಲ ಚನ್ನ ಸಂಗಮದೇವ
      – ಚನ್ನ ಬಸವಣ್ಣನವರು

      ಮೊದಲು ಸರಿಯಾಗಿ ವಚನ ಸಾಹಿತ್ಯ ಓದಿ ನಂತರ ಕಾಮೆಂಟ್ ನೀಡಿ

      ಇಷ್ಟಲಿಂಗದ ಜನಕ ಗುರು ಬಸವಣ್ಣನವರು ಎಂಬುದು ಸತ್ಯ
      ನೀವು ಯಾವ ವೇದಿಕೆ ಸಿದ್ದ ಮಾಡಿದರು ನಾನು ದಾಖಲೆ ಸಮೇತ ಪ್ರತಿಪಾದನೆ ಮಾಡುತ್ತೇನೆ

      ನಿಮ್ಮಂತಹ ಜನರಿಂದೇ ಲಿಂಗಾಯತರು ತಪ್ಪು ದಾರಿ ಹಿಡಿಯುತ್ತಿದ್ದಾರೆ

    • ಮಲ್ಲಿಕಾರ್ಜುನ. ಎಪ್.ಎನ್. says:

      ಇಷ್ಟಲಿಂಗ ಮತ್ತು ಶಿವಯೋಗದ ಅಸ್ತಿತ್ವ,ಆಚರಣೆ ಬಗ್ಗೆ ಇಲ್ಲ ಸಲ್ಲದ ಭಿನ್ನಾಭಿಪ್ರಾಯದಲ್ಲಿಯೇ ಕಾಲ ಕಳೆಯುವ ಗುರು ವಿರಕ್ತರ ಶಿಷ್ಯರು ಹಾಗೂ ಸ್ವಾಮಿಗಳು ಒಂದನ್ನು ಮಾತ್ರ ನೆನಪಿಡಬೇಕಾದ ಸಂಗತಿ ಏನಂದರೆ ಇವೆಲ್ಲವನ್ನೂ ಬಿಟ್ಟು ಸಮಾಜದ ಜನರು ಇಷ್ಟಲಿಂಗ ಧಾರಣೆ ಹಾಗೂ ಶಿವಯೋಗದ ಆಚರಣೆ ಬಗ್ಗೆ ಜನರಿಗೆ ತಿಳಿಸುವದು ಯಾವಾಗ ? ಕೇವಲವಾದ ಭಿನ್ನಾಭಿಪ್ರಾಯ ಕೇಳಿ ಕೇಳಿ ಜನ ರೋಶಿಹೋಗಿದ್ದಾರೆ.

    • ಬಸವರಾಜ್ ಎಚ್ ಜಿ says:

      ನಿಮ್ಮದು ತಪ್ಪು ಅಭಿಪ್ರಾಯ ಇಷ್ಟ ಲಿಂಗ ಜನಿಕ ಬಸವಣ್ಣನವರು ಅದಕ್ಕೆ ಅದಾರ ವಚನ ಸಾಹಿತ್ಯ ಮತ್ತು ಶರಣರ ವಚನಗಳನ್ನ ಓದಿ ಬಸವ ಪೂರ್ವ ಯಾರು ಇಷ್ಟಲಿಂಗ ಧರಿಸಿರುವ ಇತಿಹಾಸ ಇಲ್ಲ ಕೆಲವು ಋಷಿಮುನಿಗಳಸ್ಟ್ ಶಿವಲಿಂಗವನ್ನ ಜಟೆಯಲ್ಲಿ ತೋಳಿನಲ್ಲಿ ಕಟ್ಟಿಕೊಳ್ಳುತ್ತಿದ್ದರು ಅದನ್ನ ಕೆಲವು ಕಡೆ ನೆಲದ ಮೇಲೆ ಇಟ್ಟು ಪೋಜಿಸಿ ಮತ್ತೆ ಇಟ್ಟುಕೊಳ್ಳುತ್ತಿದ್ದರು ಅನ್ನುವ

Leave a Reply

Your email address will not be published. Required fields are marked *